ಬಜ್ಪೆ: ಯುವಕನಿಗೆ ಚೂರಿ ಇರಿತ

  September 3,2023
news-banner
ಬಜ್ಪೆ: ಇಲ್ಲಿನ ಕಳವಾರು ಎಂಬಲ್ಲಿ ಯುವಕನೋರ್ವನಿಗೆ ಚೂರಿ ಇರಿದಿರುವ ಘಟನೆ ವರದಿಯಾಗಿದೆ.

ಕೆಲ ಮೂಲಗಳ ಪ್ರಕಾರ ಇತ್ತಂಡಗಳ ಮಧ್ಯೆ ಚೂರಿ ಇರಿತ ನಡೆದಿದೆ ಎಂಬ ಮಾಹಿತಿ ಇದೆ.

ಬಜ್ಪೆ ಕಳವಾರು ಶಾಂತಿಗುಡ್ಡೆ ನಿವಾಸಿ ಸಫ್ವಾನ್‌ (23) ಚೂರಿ ಇರಿತಕ್ಕೆ ಒಳಗಾದ ಯುವಕ ಎಂದು ತಿಳಿದು ಬಂದಿದೆ.

ಚೂರಿ ಇರಿತಕ್ಕೊಳಗಾದ ಯುವಕನ್ನು ಬಜ್ಪೆಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಕೆಲದಿನಗಳಿಂದ ಕಳವಾರು ಭಾಗದಲ್ಲಿ ಮಧ್ಯ ವ್ಯಸನಿಯೋರ್ವ ಅನ್ಯ ಧರ್ಮಿಯರಿಗೆ ಹಲ್ಲೆ ನಡೆಸಿದ್ದ ಪ್ರಕರಣ ದಾಖಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಚೂರಿ ಇರಿತ ಸಂಭವಿಸಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತ ಪಡಿಸಿದ್ದಾರೆ. ಹಲ್ಲೆ ಘಟನೆಯ ಸಂಬಂಧ ಸುರತ್ಕಲ್‌ ಪೊಲೀಸರು ಇಂದಿನವರೆಗೂ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು ಎನ್ನಲಾಗಿದ್ದು, ಇಂದು ಪೊಲೀಸರನ್ನು ಸ್ಥಳಕ್ಕೆ ನಿಯೋಜಿಸಿರಲಿಲ್ಲ ಎಂದು ಸ್ಥಳೀಯರು ಮಾಃಇತಿ ನೀಡಿದ್ದಾರೆ.

ಸದ್ಯ ಸುರತ್ಕಲ್‌ ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Leave Your Comments