ಮಂಗಳೂರು: ರಾಜ್ಯಾದ್ಯಂತ ಭಾರೀ ಸುದ್ದಿಯಾಗಿದ್ದ ಸುಳ್ಯ ನೆಟ್ಟಾರ್ ನ ಬಿಜೆಪಿ ಯುವ ಮೋರ್ಚ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ಕುರಿತ ಸ್ಪೋಟಕ ಮಾಹಿತಿಯೊಂದು ಹೊರಬಂದಿದೆ.
ಪ್ರವೀಣ್ ನೆಟ್ಟಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡೆಸಿದ್ದಾರೆ ಎನ್ನುತ್ತಿರುವ ಹಿಂದೂ ಕಾರ್ಯಕರ್ತರೊಬ್ಬರದ್ದು ಎನ್ನಲಾದ ವಾಯ್ಸ್ ಮೆಸೇಜ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬಿಜೆಪಿ ಪಕ್ಷದ ವಾಟ್ಸಪ್ ಗ್ರೂಪ್ ಒಂದರಲ್ಲಿ ಚರ್ಚೆಗಳು ನಡೆಯುತ್ತಿದ್ದ ವೇಳೆ ಸಂಘ ಪರಿವಾರಕ್ಕೆ ಸೇರಿದ್ದವರೆನ್ನಲಾದ ವ್ಯಕ್ತಿಯೊಬ್ಬರು ತುಳು ಭಾಷೆಯಲ್ಲಿ ಮಾತನಾಡಿರುವ ವಾಯ್ಸ್ ಇದು ಎನ್ನಲಾಗಿದ್ದು, ಸದ್ಯ ವೈರಲ್ ಆಗುತ್ತಿದೆ.
" ಕಟೀಲ್ ಸತ್ತ. ರಂ..ಮಗ, ಅವನಿಗೆ ಪ್ರವೀನ್ ನೆಟ್ಟಾರ್ ನ ಮನೆಯವರ ಶಾಪವೇ ಸಾಕು. ಆತ ಪ್ರವಿಣ್ ನೆಟ್ಟರ್ ಅವರನ್ನು ಹಣ ನೀಡಿ ಕೊಲೆ ಮಾಡಿಸಿದ್ದಾನೆ. ಇದನ್ನು ಯಾರೂ ಬಾಯಿ ಬಿಡುತ್ತಿಲ್ಲ. ಆತನಿಗೆ ( ನಳಿನ್ ಕುಮಾರ್ ಕಟಿಲ್ ಗೆ) ಅವರ ( ಪ್ರವೀಣ ನೆಟ್ಟರ್ ) ಮನೆಯವರ, ಅವರ ತಂದೆ ತಾಯಿಯ ಶಾಪವೇ ಸಾಕು. ಮೊನ್ನೆ ಗೃಹ ಪ್ರವೇಶಕ್ಕೆ ಹೋಗಿದ್ದ. ಆಗಲೇ ಅವರ ಮನಸ್ಸಿಗೆ ಬೇಜಾರಾಗಿದೆ. ಅವನಿಗೆ ಅವರದ್ದೇ ಶಾಪ ಬೇರೆ ಯಾರದ್ದೂ ಅಲ್ಲ. ಇನ್ನೂ ಅತನಿಗೆ ಹೆಚ್ಚಾಗಲಿದೆ. ರಕ್ತ ವಾಂತಿ ಮಾಡಿ ಸಾಯುತ್ತಾನೆ. ರಂ... ಮಗ" ಎಂದು ತುಳು ಭಾಷೆಯಲ್ಲಿ ಹೀನಾಯಮಾನವಾಗಿ ಬೈಯ್ಯುತ್ತಿರುವ ವಾಯ್ಸ್ ಕ್ಲಿಪ್ ವೊಂದು ಭಾರೀ ವೈರಲ್ ಆಗುತ್ತಿದೆ.
ಸದ್ಯ ಈ ವಾಯ್ಸ್ ಕರಾವಳಿ ಸೇರಿದಂತೆ ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದ್ದು, ಬಿಜೆಪಿಯೇ ತನ್ನ ಕಾರ್ಯಕರ್ತರನ್ನು ಹತ್ಯೆ ಮಾಡಿಸಿದೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.