ನಿರ್ಮಾಣ ಹಂತದ ಕಟ್ಟಡದಲ್ಲಿ ಅನುಮಾನಸ್ಪದ ರೀತಿಯಲ್ಲಿ ದಂಪತಿಯ ಮೃತದೇಹ ಪತ್ತೆ

  April 18,2025
news-banner
ಬೆಂಗಳೂರು: ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಅನುಮಾನಸ್ಪದ ರೀತಿಯಲ್ಲಿ ದಂಪತಿಯ ಮೃತದೇಹಗಳು ಪತ್ತೆಯಾಗಿರುವ ಘಟನೆ ನಡೆದಿದೆ.

ಮೃತ ದಂಪತಿ ಮೆಹೆಬೂಬ್ (45) ಹಾಗೂ ಪರ್ವೀನ್ (35) ಎಂದು ತಿಳಿದು ಬಂದಿದೆ.

ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಧಾರವಾಡ ಮೂಲದ ವೈದ್ಯರೊಬ್ಬರಿಗೆ ಸೇರಿದ ಕಟ್ಟದ ಕೆಲಸವನ್ನು ಮೆಹಬೂಬ್ ಕಳೆದ ಒಂದು ವರ್ಷದಿಂದ ಮಾಡುತ್ತಿದ್ದ. ಇನ್ನೇನು ಆ ಕಟ್ಟದ ಕೆಲಸ ಮುಗಿದು, ಇಂಟಿರಿಯರ್ ಕೆಲಸಗಳನ್ನು ಮಾಡಬೇಕಿತ್ತು. ಈ ಬಗ್ಗೆ ಕಟ್ಟಡ ಮಾಲೀಕನ ಜೊತೆ ಮಾತುಕತೆ ಮಾಡಿದ್ದ ಮೆಹಬೂಬ್ ರಂಜಾನ್ ಹಬ್ಬ ಮುಗಿದ ಕೂಡಲೇ ಮಾಡುವುದಾಗಿ ಹೇಳಿ ಹೋಗಿದ್ದರು. ಒಪ್ಪಿಕೊಂಡ ಕೆಲಸ ಸಮಯಕ್ಕೆ ಸರಿಯಾಗಿ ಮುಗಿಸಬೇಕು ಎಂದು ಯಾದಗಿರಿಯಿಂದ ವಾಪಸ್ ಆಗಿದ್ದರು. ಆದರೆ ವಾಪಸ್ ಆಗಿ ಬಂದಿದ್ದ ದಂಪತಿ ಕೆಲಸ ಮಾಡುತ್ತಿದ್ದ ಕಟ್ಟಡದಲ್ಲೇ ಅನುಮಾನಸ್ಪದವಾಗಿ ಹೆಣವಾಗಿದ್ದಾರೆ.

ಪರ್ವಿನ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಮಹೆಬೂಬ್ ಪತ್ನಿಯ ಪಕ್ಕದಲ್ಲೇ ನೆಲದ ಮೇಲೆ ಮೃತಪಟ್ಟಿದ್ದಾನೆ. ಆದರೆ ಮೆಹಬೂಬ್ ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿರುವುದು ಅನುಮಾನಸ್ಪದ ಮೂಡಿಸಿದೆ. 

ನಿರ್ಮಾಣ ಹಂತದ ಕಟ್ಟಡದಿಂದ ಬರುತ್ತಿದ್ದ ದುರ್ವಾಸನೆಯಿಂದ ಬೆಸತ್ತ ಸ್ಥಳೀಯರು ಅನುಮಾನದ ಮೇಲೆ ಸಂಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹಗಳನ್ನು ನೋಡಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸದ್ಯ ಘಟನೆಯ ಸಂಬಂಧ ಸ್ಥಳ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿ ಕಟುಂಬಸ್ಥರಿಗೆ ಮಾಹಿತಿ ನೀಡಿದೆ. 

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. 

ಪ್ರಾಥಮಿಕವಾಗಿ ಪೊಲೀಸರ ಪರಿಶೀಲನೆ ವೇಳೆ ದಂಪತಿ ಗಲಾಟೆ ಮಾಡಿಕೊಂಡು ಪತಿಯನ್ನು ಕೊಲೆಮಾಡಿ ನಂತರ ಆಕೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನವಿದ್ದು, ಈ ಬಗ್ಗೆ ಸಂಜಯನಗರ ಪೊಲೀಸರು ಎಲ್ಲಾ ಆಯಾಮಾಗಳಲ್ಲಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave Your Comments