ಹಣಕಾಸು ವಿಚಾರಕ್ಕೆ ಹಲ್ಲೆ: ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು

  April 16,2025
news-banner
ಮಂಡ್ಯ: ಮದ್ದೂರು ತಾಲೂಕಿನ ಮುಟ್ಟನಹಳ್ಳಿಯಲ್ಲಿ ಹಣಕಾಸು ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ 13 ದಿನಗಳ ಬಳಿಕ ಮೃತಪಟ್ಟ ಘಟನೆ ನಡೆದಿದೆ.

ಮೃತ ಯುವಕ ಮುಟ್ಟನಹಳ್ಳಿಯ ಸುಮಂತ್ ಎಂದು ತಿಳಿದು ಬಂದಿದೆ. 

ಗ್ರಾಮದ ಅಂಬರೀಶ್ ಹೆಂಡತಿ ಜೊತೆ ಹಣಕಾಸು ವಿಚಾರಕ್ಕೆ ಯುವಕ ಗಲಾಟೆ ಮಾಡಿಕೊಂಡಿದ್ದ ಘಟನೆ ಬಳಿಕ ಸುಮಂತ್‌ನನ್ನ ಕರೆಸಿಕೊಂಡಿದ್ದ ಅಂಬರೀಶ್ ಬೆಂಬಲಿಗರು ಹಲ್ಲೆ ನಡೆಸಿದ್ದರು ಎಂದು‌ ಹೇಳಲಾಗಿದೆ.

ಅಂಬರೀಶ್, ರಜನಿಕಾಂತ್ ಹಾಗೂ ಲೋಕೇಶ್ ಹಣಕಾಸು ವಿಚಾರವಾಗಿ ಜಗಳ ತೆಗೆದಿದ್ದರು. ಮಾತಿನ ಚಕಮಕಿ ವೇಳೆ ಸುಮಂತ್ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದರು ಎಂದು ತಿಳಿದು ಬಂದಿದೆ.

ಗಲಾಟೆಯಲ್ಲಿ ಗಾಯಗೊಂಡು ಸುಮಂತ್ ಕೋಮಾ ಸ್ಥಿತಿ ತಲುಪಿದ್ದ ಗಾಯಾಳುಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಈ ಕುರಿತು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave Your Comments