ಗುಂಡೇಟಿನಿಂದ ಗಾಯಗೊಂಡ ಮಹಿಳೆಯ ಮೃತದೇಹ ಪತ್ತೆ

  April 15,2025
news-banner
ನವದೆಹಲಿ: ಗುಂಡೇಟಿನಿಂದ ಗಾಯಗೊಂಡ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ ಶಹದಾರಾದ ಜಿಟಿಬಿ ಎನ್‌ಕ್ಲೇವ್‌ನಲ್ಲಿ ವರದಿಯಾಗಿದೆ.

ಸೋಮವಾರ ರಾತ್ರಿ ಮಹಿಳೆಯೊಬ್ಬರಿಗೆ ಗುಂಡು ಹಾರಿಸಲಾಗಿದ್ದು, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಪಿಸಿಆರ್ ಕರೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ. 

ಜಿಟಿಬಿ ಎನ್‌ಕ್ಲೇವ್ ಠಾಣೆಯ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಮಹಿಳೆಯ ಮೃತದೇಹವನ್ನು ಪತ್ತೆ ಮಾಡಿದೆ ಎಂದು ವರದಿ ತಿಳಿಸಿದೆ. 

ಪರೀಕ್ಷೆ ನಡೆಸಿದಾಗ ಆಕೆಯ ದೇಹದ ಮೇಲೆ ಎರಡು ಗುಂಡುಗಳು ಹೊಕ್ಕಿರುವುದು ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಹಿಳೆಗೆ ಸುಮಾರು 20 ವರ್ಷ ವಯಸ್ಸಾಗಿರುವಂತೆ ಕಾಣುತ್ತದೆ, ಆಕೆ ಯಾರೆಂದು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಲು ಅಪರಾಧ ತಂಡವನ್ನು ಕರೆಸಲಾಗಿದೆ. 

ಅಪರಾಧಿಗಳನ್ನು ಗುರುತಿಸಲು ಪೊಲೀಸರು ಹತ್ತಿರದ ಪ್ರದೇಶಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. 

ಘಟನೆಯ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave Your Comments