ಎ.18: ಉಲಮಾ ಒಕ್ಕೂಟದ ಪ್ರತಿಭಟನೆ ಯಶಸ್ಸಿಗೆ ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲೆ ಕರೆ

  April 15,2025
news-banner
ಮಂಗಳೂರು: ಕೇಂದ್ರ ಸರ್ಕಾರದ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಕರ್ನಾಟಕ ಉಲಮಾ ಒಕ್ಕೂಟದ ವತಿಯಿಂದ ಎಪ್ರಿಲ್ 18, ಶುಕ್ರವಾರ ಮಂಗಳೂರಿನ ಅಡ್ಯಾರ್ ಕಣ್ಣೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಸಭೆಯನ್ನು ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ಕರೆ ನೀಡಿದೆ.

ಅಲ್ ಮದೀನ ಮಂಜನಾಡಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಕೇಂದ್ರದ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ನಿರ್ಣಯ ಮಂಡಿಸಲಾಯಿತು. 

ಜಿಲ್ಲಾಧ್ಯಕ್ಷ ರವೂಫ್ ಹಿಮಮಿ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.
ತಲೆತಲಾಂತರಗಳಿಂದ ಮುಸ್ಲಿಮರು ರಕ್ಷಿಸಿಕೊಂಡು ಬರುತ್ತಿರುವ ವಕ್ಫ್ ಸೊತ್ತುಗಳನ್ನು ಕಬಳಿಸುವ ಹುನ್ನಾರವನ್ನು ಹೊಂದಿರುವ ನೂತನ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಮುಸ್ಲಿಮರು ಸಾರಾಸಗಟವಾಗಿ ತಿರಸ್ಕರಿಸಿದ್ದಾರೆ, ಈ ಕುರಿತು ಕರ್ನಾಟಕ ಉಲಮಾ ಒಕ್ಕೂಟ ಕರೆ ನೀಡಿರುವ ಬೃಹತ್ ಪ್ರತಿಭಟನೆಯನ್ನು ಯಶಸ್ವಿಗೊಳಿಸುವುದು ಸಮುದಾಯದ ಭಾದ್ಯತೆಯಾಗಿದ್ದು, ದ.ಕ ಜಿಲ್ಲಾ ವ್ಯಾಪ್ತಿಯ ಪ್ರತಿಯೊಂದು ಎಸ್ಸೆಸ್ಸೆಫ್ ಯುನಿಟ್‌ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ನಾಗರಿಕರು ಭಾಗವಹಿಸುವಂತೆ ಎಸ್ಸೆಸ್ಸೆಫ್ ಪ್ರಕಟಣೆಯಲ್ಲಿ ತಿಳಿಸಿದೆ.

Leave Your Comments