ಧರ್ಮಸ್ಥಳ: ಅಡ್ಡಹೊಳೆ ಶಿರಾಡಿ ಪೆಟ್ರೋಲ್ ಬಂಕ್ ಬಳಿ ಬಸ್ಸಿನ ಟಯರ್ ಸ್ಫೋಟಗೊಂಡು ಬಸ್ ಡಿವೈಡರ್ ಮೇಲೇರಿದ ಘಟನೆ ನಡೆದಿದೆ.
ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ಸಿನ ಟಯರ್ ಸ್ಫೋಟಗೊಂಡು ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ 13 ಮಂದಿಗೆ ಗಾಯವಾಗಿದ್ದು, ಮೂವರನ್ನು ಉಜಿರೆಯ ಆಸ್ಪತ್ರೆಗೆ, ಉಳಿದವರನ್ನು ನೆಲ್ಯಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.