ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ತಿಪ್ಪಗೊಂಡನಹಳ್ಳಿಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎರಡು ಸಿಂಧಿ ಹಸುಗಳು ಸಹಿತ ಎರಡು ಕರುಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಕಳೆದ ರಾತ್ರಿ ಗ್ರಾಮದ ಸಂತೋಷ್ ಎಂಬವರು ತಮ್ಮ ಕೊಟ್ಟಿಗೆಯಲ್ಲಿ ಎರಡು ಹಸುಗಳನ್ನು ಕರುಗಳ ಸಹಿತ ಕಟ್ಟಿ ಹಾಕಿದ್ದರು ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ನೋಡುವಾಗ ಹಸು ಹಾಗೂ ಕರುಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಎಲ್ಲಾ ಕಡೆ ಹುಡುಕಿದರೂ ಹಸುಗಳು ಪತ್ತೆಯಾಗದೆ ಇರುವುದರಿಂದ ಸಂತೋಷ್ ತಮ್ಮ ಹಸು ಹಾಗೂ ಕರುಗಳನ್ನು ಹುಡುಕಿ ಕೊಡುವಂತೆ ಸಖರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.