ಮೂಡಿಗೆರೆ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ನಡೆಸಿರುವ ಘಟನೆ ಬಣಕಲ್ ಹೋಬಳಿಯ ಕೊಟ್ಟಿಗೆಹಾರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಸುರೇಖಾ (38) ಎಂದು ಗುರುತಿಸಲಾಗಿದೆ.
ಎ.12 ರಂದು ಸಂಜೆ ಅಜಾದ್ ನಗರದಲ್ಲಿ ಈ ಘಟನೆ ನಡೆದಿದೆ. ಮಹಿಳೆ ಮನೆಯಲ್ಲಿ ಒಬ್ಬಳೇ ಇದ್ದಾಗ, ರಾಮನಗರದ ವ್ಯಕ್ತಿಯೊಬ್ಬ ಮನೆಗೆ ಬಂದು ವಾಹನದ ಬಾಡಿಗೆ ಬಾಕಿ ಹಣ 700 ರೂ. ತಕ್ಷಣ ನೀಡುವಂತೆ ಒತ್ತಾಯಿಸಿದ್ದ. ಹಣ ಇಲ್ಲವೆಂದಾಗ, “ಹಣ ಬೇಡ, ನನ್ನ ಜೊತೆ ಮಲಗಿಕೋ” ಎಂದು ಹೇಳಿ ಆಕೆಯ ಬಲಗೈ ಹಿಡಿದು ಎಳೆಯುವ ಪ್ರಯತ್ನ ನಡೆಸಿದ್ದ ಎನ್ನಲಾಗಿದೆ.
ಮಹಿಳೆ ತಪ್ಪಿಸಿಕೊಂಡು ಓಡಿದಾಗ ಆಕೆಯ ಕೂದಲನ್ನು ಹಿಡಿದು ಹೊಟ್ಟೆ ಹಾಗೂ ಸೊಂಟಕ್ಕೆ ಲಾತಿಯಿಂದ ಬಡಿದು ತಳ್ಳಿ ಕೆಳಗೆ ಬೀಳಿಸಿದ್ದಾನೆ. ನಂತರ ಮಹಿಳೆ ತನ್ನ ಮಗಳನ್ನು ಕರೆಸಿದಾಗ, ಮನೆಗೆ ಬಂದ ಮಗಳನ್ನು ಕೂಡ ದೈಹಿಕವಾಗಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ.
ಈ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.