ವಿದ್ಯುತ್ ಶಾರ್ಟ್ ಸರ್ಕ್ಯೂರ್ಟ್‌: ಕೊಟ್ಟಿಗೆಯಲ್ಲಿದ್ದ 7 ಹೋರಿಗಳು ಸಜೀವ ದಹನ

  January 21,2025
news-banner
ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೇಮಗಾರದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂರ್ಟ್‌ನಿಂದ ಕೊಟ್ಟಿಗೆಯಲ್ಲಿದ್ದ 7 ಹೋರಿಗಳ ಸಜೀವ ದಹನವಾದ ಘಟನೆ ನಡೆದಿದೆ.

ಹೇಮಗಾರದ ಮಹೇಶ್ ಹೆಗಡೆ ಎಂಬವರ ಮನೆಯಲ್ಲಿ ತಡರಾತ್ರಿ ಘಟನೆ ಸಂಭವಿಸಿದೆ ಎಂ್ಉ ತಿಳಿದು ಬಂದಿದೆ..

ಮನೆಯಲ್ಲಿದ್ದ ವಯರ್ ಗೆ ಶಾರ್ಟ್ ಸರ್ಕ್ಯೂರ್ಟ್‌ನಿಂದಾಗಿ ಕಿಡಿ ಹೊತ್ತಿದ್ದು, ಕೊಟ್ಟಿಗೆಯ ಮೇಲ್ಛಾವಣಿಯ ಮೇಲಿರುವ ಹುಲ್ಲಿಗೆ ಈ ಕಿಡಿ ತಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ.

ಹುಲ್ಲಿಗೆ ಬಿದ್ದ ಬೆಂಕಿ ಆವರಿಸಿ ಕೊಟ್ಟಿಗೆಯಲ್ಲಿದ್ದ 7 ಹೋರಿಗಳು ಸಜೀವ ದಹನವಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Leave Your Comments