ಬೆಂಗಳೂರು: ಒಡಿಶಾದ ಬರ್ಹoಪುರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ "ಅಸ್ಮಿತಾ ಖೇಲೋ ಇಂಡಿಯಾ ಮಹಿಳಾ ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ -2025"ರಲ್ಲಿ ಕಾಪಿಕಾಡು ಆಕಾಶ ಭವನ ನಿವಾಸಿ ರಶ್ಮಿತಾ ಆಚಾರ್ಯ ಚಿನ್ನದ ಪದಕ ಪಡೆದಿದ್ದಾರೆ.
81ಕೆಜಿ ಜೂನಿಯರ್ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ರಶ್ಮಿತಾ ಅವರು, ಪ್ರಸ್ತುತ ಜ್ಯೋತಿ ಬಲ್ಮಠದ ಮಹಿಳಾ ಪಿಯು ಕಾಲೇಜಿನಲ್ಲಿ ಎರಡನೇ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.
ಪುಷ್ಪರಾಜ್ ಹೆಗಡೆ ಅವರಿಂದ ತರಬೇತಿ ಪಡೆದಿರುವ ಇವರು ಕಾಪಿಕಾಡು ಆಕಾಶ ಭವನ ನಿವಾಸಿ ರೂಪ ಮತ್ತು ಪ್ರಭಾಕರ್ ಆಚಾರ್ಯ ಅವರ ಮಗಳು.