ಮಲಪ್ಪುರಂ: ಕ್ರೇನ್ ವೊಂದು ಸ್ಕೂಟರ್ ಗೆ ಡಿಕ್ಕಿಯಾಗಿ ವಿದ್ಯಾರ್ಥಿನಿಯೋರ್ವರು ಮೃತಪಟ್ಟಿರುವ ಘಟನೆ ಮಲಪ್ಪುರಂ ಪೆರಿಂತಲ್ಮನ್ನಾದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಮಲಪ್ಪುರಂನ ಪೂಕೂಟೂರು ನಿವಾಸಿ ನೀಯಾ (21) ಎಂದು ತಿಳಿದು ಬಂದಿದೆ.
ನೀಯಾ ಸ್ಕೂಟರ್ ಹಿಂದೆ ಕುಳಿತಿದ್ದರು. ಸ್ಕೂಟರ್ ಸವಾರ ಡಿವೈಡರ್ ಬಳಿ ಸ್ಕೂಟರನ್ನು ಬಲಕ್ಕೆ ತಿರುಗಿಸುತ್ತಿದ್ದಾಗ ಹಿಂದಿನಿಂದ ಬಂದ ಕ್ರೇನ್ ಸ್ಕೂಟರ್‌ಗೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಸ್ಕೂಟರ್‌ಗೆ ಕ್ರೇನ್ ಡಿಕ್ಕಿಯಾದ ರಭಸಕ್ಕೆ ನೀಯಾ ರಸ್ತೆಗೆ ಬಿದ್ದಿದ್ದಾರೆ. ಇದರೊಂದಿಗೆ ಕ್ರೇನ್‌ನ ಹಿಂಬದಿಯ ಚಕ್ರವೂ ನೀಯಾ ದೇಹಕ್ಕೆ ತಗುಲಿದೆ. ಸ್ಕೂಟರ್ ಸವಾರ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಘಟನೆಯಿಂದ ನೀಯಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿದು ಬಂದಿದೆ.