ತಂದೆ ಬೈಕ್ ಕೊಡಿಸಲಿಲ್ಲವೆಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಗ

  December 7,2024
news-banner
ದಾವಣಗೆರೆ: ನ್ಯಾಮತಿ ಪಟ್ಟಣದಲ್ಲಿ ತಂದೆ ಬೈಕ್ ಕೊಡಿಸಲಿಲ್ಲ ಎಂದು ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕನನ್ನು ವಿಕಾಸ್.ಆರ್ (20) ಎಂದು ಗುರುತಿಸಲಾಗಿದೆ.

ಯುವಕ ಹಲವು ದಿನಗಳಿಂದ ಬೈಕ್ ಕೊಡಿಸುವಂತೆ ತನ್ನ ತಂದೆಯ ಬಳಿ ಕೇಳಿದ್ದ. ಹಣದ ಅಡಚಣೆಯಿಂದ ಪೋಷಕರಿಗೆ ಬೈಕ್ ಕೊಡಿಸಲು ಆಗಿರಲಿಲ್ಲ ಎನ್ನಲಾಗಿದೆ.

ಇದೇ ವಿಚಾರಕ್ಕೆ ಯುವಕ ಮಾನಸಿಕವಾಗಿ ಕುಗ್ಗಿ ತಂದೆ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದ. ಮನೆಯವರ ಜೊತೆ ಮಾತನಾಡುವುದು ಮತ್ತು ಸರಿಯಾಗಿ ಊಟ ಮಾಡುವುದನ್ನು ಸಹ ಬಿಟ್ಟಿದ್ದ. ಮನೆ ತೊರೆದು ಒಂದು ವಾರದಿಂದ ಕುಂಕುವ ಗ್ರಾಮದ ಸಂಬಂಧಿಕರ ಮನೆಯಲಿದ್ದ. ಅಲ್ಲೇ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

Leave Your Comments