ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಮೃತ್ಯು

  September 4,2024
news-banner
ಶಿವಮೊಗ್ಗ: ಜಿಲ್ಲೆಯ ಕಲ್ಲುಕೊಪ್ಪ ಸಮೀಪದ ಗುತ್ತಿಹಳ್ಳ ಬಳಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟ ಘಟನೆ ನಡೆದಿದೆ.

ಮೃತ ವ್ಯಕ್ತಿ ತಾಲೂಕಿನ ಸಂಪಿಗೆಹಳ್ಳ ನಿವಾಸಿ ಮಂಜುನಾಥ್ ಗದ್ದೆಮನೆ(27) ಎಂದು ತಿಳಿದು ಬಂದಿದೆ.

ಮಂಜುನಾಥ್ ಡೈರಿಗೆ ಹಾಲು ಹಾಕಿ, ಮನೆಗೆ ಬರುತ್ತಿದ್ದ ವೇಳೆ, ಗುತ್ತಿಹಳ್ಳದಿಂದ ಸಂಪಿಗೆಹಳ್ಳದ ಮನೆಗೆ ಬರುತ್ತಿದ್ದಾಗ, ಆಯನೂರಿನಿಂದ ಬೆಜ್ಜವಳ್ಳಿ ಕಡೆಗೆ ಹೋಗುತ್ತಿದ್ದಾಗ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.

ತಕ್ಷಣವೇ ಗಾಯಾಳು ಮಂಜುನಾಥ್‌ ನನ್ನು ಸ್ಥಳೀಯರು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದಿದ್ದು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ ಗಂಭೀರ ಗಾಯಗೊಂಡಿದ್ದ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೊಂದು ಬೈಕ್ ನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು, ಅವರಿಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave Your Comments