ರೈಲ್ವೆ ಇಲಾಖೆಯಲ್ಲಿ ಕೆಲಸ ‌ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ: ಕ್ಲರ್ಕ್ ನ ಬಂಧನ

  September 4,2024
news-banner
ಹುಬ್ಬಳ್ಳಿ: ರೈಲ್ವೆ ಇಲಾಖೆಯಲ್ಲಿ ಕೆಲಸ ‌ಕೊಡಿಸುವುದಾಗಿ ನಂಬಿಸಿ ಇಲಾಖೆಯ ನೌಕರನೊಬ್ಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿರುವ ಘಟನೆ ವರದಿಯಾಗಿದೆ.

ಆರೋಪಿ ನದೀಂ ಎಂದು ತಿಳಿದು ಬಂದಿದೆ. 

ನದೀಂ ನೈರುತ್ಯ ರೈಲ್ವೆಯ ಮುಖ್ಯ ಕಚೇರಿಯ ಆರ್ಥಿಕ ವಿಭಾಗದಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ತನಗೆ ರೈಲ್ವೆ ನೇಮಕಾತಿ ವಿಭಾಗದಲ್ಲಿ ಪರಿಚಿತರಿದ್ದಾರೆ. ಕೆಲಸ ಕೊಡಿಸುವೆ, ಅದಕ್ಕಾಗಿ ಹಣ ಕೊಡುವಂತೆ ಹೇಳಿದ್ದಾನೆ. ಕೊಡಲು ಆಗದಿದ್ದರೆ ನಮ್ಮ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಬೇಕೆಂದು ಹೇಳಿ, ರೈಲ್ವೆ ಗೆಸ್ಟ್ ಹೌಸ್‌‌ ರೂಮ್‌ಗೆ ಕರೆಯಿಸಿಕೊಂಡಾಗ ಮಹಿಳೆಯು ಸಂಶಯಗೊಂಡು ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರು ಕೇಶ್ವಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೊಲೀಸರು ಆತನನ್ನು ಬಂಧಿಸಿದ್ದು, ನ್ಯಾಯಾಲಯದ ಅನುಮತಿ ಮೇರೆಗೆ ಆತನನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

Leave Your Comments