ಕಿನ್ನಿಗೋಳಿ: ಇಲ್ಲಿನ ಬಳಕುಂಜೆಯ ಸಂತ ಪಾವ್ಲ್ ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರೋತ್ಸವವನ್ನು ವಿಜೃಂಭಣೆಯೊಂದಿಗೆ ಆಚರಿಸಲಾಯಿತು.
ಶಾಲಾ ಸಂಚಾಲಕರಾದ ವಂದನೀಯ ಗುರು ಪಾವ್ಲ್ ಸಿಕ್ವೇರಾ ಅವರು ದ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಭಾರತದ ಪ್ರತಿಯೋರ್ವ ಪ್ರಜೆಯು ತನ್ನ ಜವಾಬ್ದಾರಿ ಅರಿತು, ತನ್ನಲ್ಲಿ ಉತ್ತಮ ಗುಣಗಳನ್ನು ಅಳವಡಿಸಿದರೆ ದೇಶವು ತನ್ನಿಂದ ತಾನೇ ಪ್ರಗತಿ ಕಾಣುತ್ತದೆ. ಈ ದಿಶೆಯಲ್ಲಿ ನಾವೆಲ್ಲರೂ ಭಾರತದ ಏಳಿಗೆಗಾಗಿ ದುಡಿಯೋಣ ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬಳಕುಂಜೆ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷೆ ಡಾ. ಫ್ರೀಡಾ ರೊಡ್ರಿಗಸ್, ಶಾಲಾ ಶಿಕ್ಷಕ - ರಕ್ಷಕ ಸಂಘದ ಅಧ್ಯಕ್ಷ ಜೋನ್ಸನ್ ಡಿಸೋಜಾ, ಶಾಲಾ ಮುಖ್ಯ ಶಿಕ್ಷಕ ಸುಕುಮಾರ್ ಎನ್., ಶಾಲಾ ಗೌರವ ಶಿಕ್ಷಕಿಯರಾದ ಗೀತಾ, ದೀಪಾ ಹಾಗೂ ಶೀತಲ್ ಉಪಸ್ಥಿತರಿದ್ದರು.
ಶಾಲಾ ನಾಯಕಿ ರಿಯಾನಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳ ಪೋಷಕರು, ಆಡಳಿತ ಮಂಡಳಿ ಸದಸ್ಯರು ಹಾಗೂ ಚರ್ಚ್ ನ ಹಲವಾರು ಕ್ರೈಸ್ತಬಾಂದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.