ಕಾವಳಕಟ್ಟೆ: 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾವಳ ಮೂಡೂರು ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವು ಪಕ್ಷದ ಕಚೇರಿಯಲ್ಲಿ ನಡೆಯಿತು.
ಕಾವಳ ಮೂಡೂರು ಬೂತ್ ಸಮಿತಿ ಅಧ್ಯಕ್ಷರಾದ ಇಮ್ರಾನ್ ದೂಮಲಿಕೆ ಮತ್ತು ಇರ್ಫಾನ್ ಕಾವಳ ಕಟ್ಟೆ ಧ್ವಜಾರೋಹಣ ಗೈದರು. ದೂಮಲಿಕೆ ಬಿ.ಜೆ.ಎಂ. ಜುಮಾ ಮಸೀದಿಯ ಖತೀಬ್ ಎ.ಎಂ. ಆದಂ ಉಸ್ತಾದ್ ದುವಾ ನಿರ್ವಹಿಸಿದರು. ಬಿಸ್ಮಿಲ್ಲಾ ಮದರಸ ದೂಮಲಿಕೆಯ ಸದರ್ ಉಸ್ತಾದ್ ಕೆ.ಪಿ. ಬದ್ರುದ್ದೀನ್ ಫೈಝಿ ಸಂದೇಶ ಭಾಷಣ ಮಾಡಿದರು. ಎಸ್ಡಿಪಿಐ ಸರಪಾಡಿ ಬ್ಲಾಕ್ ಉಪಾಧ್ಯಕ್ಷರಾದ ಉಸ್ಮಾನ್ ಅಲಂಗಾಲು ಪ್ರಸ್ತಾವಿಕ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಪಂಚಾಯಿತ್ ಸದಸ್ಯರಾದ ಸಫಾ ಸಲ್ಮಾ ಕಾವಲ್ ಕಟ್ಟೆ, ದೂಮಲಿಕೆ ಜುಮಾ ಮಸೀದಿ ಅಧ್ಯಕ್ಷ ಹುಸೈನಾರ್, ರಝಾಕ್ ಉಸ್ತಾದ್, ಸಾದಿಕ್ ದೂಮಲಿಕೆ ಹಾಗೂ ಕಾವಳ ಕಟ್ಟೆ ಬ್ರಾಂಚ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂದಿದ್ದರು. ಕಾರ್ಯಕ್ರಮವನ್ನು ಎಸ್ಡಿಪಿಐ ಕಾವಳ ಮೂಡೂರು ಬೂತ್ ಸಮಿತಿ ಕಾರ್ಯದರ್ಶಿ ಸಾದಿಕ್ ದೂಮಲಿಕೆ ನಿರೂಪಿಸಿದರು.