ಮಚ್ಚಿನಿಂದ ಕೊಚ್ಚಿ ತಂದೆಯ ಬರ್ಬರವಾಗಿ ಕೊಲೆಗೈದ ಮಗ

  August 14,2024
news-banner
ತುಮಕೂರು: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಆಲಪನಹಳ್ಳಿ ಗ್ರಾಮದಲ್ಲಿ ಮಗನೇ ತನ್ನ ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.

ಕೊಲೆಯಾದ ತಂದೆ ವೆಂಕಟಪ್ಪ (75) ಎಂದು ತಿಳಿದು ಬಂದಿದೆ. 

ಸಿದ್ದಪ್ಪ (45) ಕೊಲೆಗೈದ ಮಗ ಎಂದು ತಿಳಿದು ಬಂದಿದೆ. 

ಕೊಲೆಯಾದ ವೆಂಕಟ್ಟಪ್ಪ ಮೂರೂವರೆ ಎಕರೆ ಆಸ್ತಿ ಹೊಂದಿದ್ದನು. ಇತ್ತೀಚೆಗೆ ಜಮೀನು ಮಾರಾಟ ಮಾಡಿದ್ದನು.
ಮಾರಾಟ ಮಾಡಿದ್ದ ಜಮೀನಿನ 25 ಲಕ್ಷ ಹಣವನ್ನು ವೆಂಕಟ್ಟಪ್ಪ ಮಗಳಿಗೆ ಕೊಟ್ಟಿದ್ದನು. ಜೊತೆಗೆ ಜಮೀನನ್ನು ಸಹ ಮಗಳ ಹೆಸರಿಗೆ ಬರೆದುಕೊಟ್ಟಿದ್ದ ಎನ್ನಲಾಗಿದೆ. 

ಇದೇ ವಿಚಾರಕ್ಕೆ ತಂದೆ ಮಗನ ಜೊತೆ ಹಲವು ಬಾರಿ ಗಲಾಟೆ ನಡೆದಿತ್ತು. ಗ್ರಾಮದ ಹಿರಿಯರ ಸಮ್ಮುಖದಲ್ಲಿ ಹಲವು ಬಾರಿ ನ್ಯಾಯ ಪಂಚಾಯತಿ ಕೂಡಾ ಮಾಡಲಾಗಿತ್ತು. ನ್ಯಾಯ ಪಂಚಾಯತಿ ಮಾಡಿದ್ದರೂ ಸಹ ಮಗನಿಗೆ ಆಸ್ತಿ, ಹಣ ನೀಡಲು ತಂದೆ ವೆಂಕಟಪ್ಪ ಹಿಂದೇಟು ಹಾಕಿದ್ದ ಎಂದು ಹೇಳಲಾಗಿದೆ. 

ಇದರಿಂದ ಬೇಸತ್ತು ತಂದೆಯನ್ನ ಮಗ ಸಿದ್ದಪ್ಪ ಕೊಲೆಗೈದಿದ್ದಾನೆ. ತಲೆಗೆ ಮಚ್ಚಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. 

ಮಚ್ಚೇಟಿಗೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ವೆಂಕಟಪ್ಪ ಸಾವನ್ನಪ್ಪಿದ್ದಾನೆ. ತಂದೆಯನ್ನು ಕೊಲೆಗೈದು ಮಗ ಸಿದ್ದಪ್ಪ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಎಎಸ್‌ಪಿ ಮರಿಯಪ್ಪ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಈ ಕುರಿತು ಕೊಳಲ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ. 

Leave Your Comments