ಹುಣಸೂರು: ತಾಲೂಕಿನ ಕಟ್ಟೆಮಳವಾಡಿಯಲ್ಲಿ ಮನೆ ಬಳಿಯ ತೆಂಗಿನ ಮರ ಬುಡಸಹಿತ ಉರುಳಿಬಿದ್ದು ಛಾವಣಿಗೆ ಹಾನಿಯಾಗಿ, ಸ್ಕೂಟರ್ ಜಖಂಗೊಂಡಿರುವ ಘಟನೆ ನಡೆದಿದೆ.
ಶನಿವಾರ ರಾತ್ರಿ ಕಟ್ಟೆಮಳವಾಡಿ ಗ್ರಾಮದ ನಂದಿ ಸರ್ಕಲ್ ಬಳಿಯ ಇನಾಯತ್ ಮನೆ ಮುಂದಿನ ಮಾವಿನ ಮರ ಹಾಗೂ ತೆಂಗಿನ ಮರ ಬಿರುಗಾಳಿಗೆ ಬುಡಸಹಿತ ಉರುಳಿ ಬಿದ್ದು ಮನೆ ಛಾವಣಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಅಲ್ಲದೇ ಮನೆ ಪಕ್ಕದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.
ಮಕ್ಕಳು ಸೇರಿದಂತೆ ಎಲ್ಲರೂ ಮನೆಯೊಳಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.