ಕೋಟ: ಯಡಾಡಿ-ಮತ್ಯಾಡಿ ಗ್ರಾಮದ ಮತ್ಯಾಡಿಯ ವಾಸದ ಮನೆಯೊಂದರಲ್ಲಿ ಇಸ್ಟೀಟು ಜುಗಾರಿ ಆಟದಲ್ಲಿ ನಿರತರಾಗಿದ್ದ 11ಮಂದಿಯನ್ನು ಕೋಟ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ಸುರೇಶ್, ಕೃಷ್ಣ, ಸಂತೋಷ್, ವಿಶ್ವನಾಥ, ಚಂದ್ರ, ರವಿ, ಸುಧಾಕರ, ಸತೀಶ, ಕೋಟಿ, ಆನಂದ ಹುಣ್ಸೆಮಕ್ಕಿ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಕೋಟ ಪೊಲೀಸ್ ಠಾಣೆಯ ಪಿಎಸ್‌ಐ ಗುರುನಾಥ ಬಿ.ಹಾದಿಮನೆ ಅವರ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ.
ಅಲ್ಲದೇ ಆಟಕ್ಕೆ ಬಳಸಿದ್ದ ಒಟ್ಟು 1,090 ರೂ. ಹಣ ಹಾಗೂ ಇತರ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.