ದಾವಣಗೆರೆ: ಹರಿಹರ ತಾಲೂಕಿನ ಧೂಳೆಹೊಳೆ ಬಳಿ ತುಂಗಭದ್ರಾ ನದಿಯಲ್ಲಿ ದನಗಳ ಮೈ ತೊಳೆಯುತ್ತಿದ್ದ ಸಂದರ್ಭದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ.
ಮೃತ ಯುವಕ ಇಂಗಳಗೊಂದಿ ಗ್ರಾಮದ ಜಯಪ್ಪ (32) ಎಂದು ತಿಳಿದು ಬಂದಿದೆ.
ಧೂಳೆಹೊಳೆ ಗ್ರಾಮದ ಬಳಿ ಶನಿವಾರ ಸಂಜೆ ತುಂಗಭದ್ರಾ ನದಿಯಲ್ಲಿ ದನಗಳ ಮೈ ತೊಳೆಯಲು ಜಯಪ್ಪ ನೀರಿಗಿಳಿದಿದ್ದ.
ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದನು ಎಂದು ತಿಳಿದು ಬಂದಿದೆ.
ಭಾನುವಾರ ಧೂಳೆಹೊಳೆ ಗ್ರಾಮದ ಬಳಿಯಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ.
ಈ ಕುರಿತು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.