ವಾಷಿಂಗ್ಟನ್: ಭಾರತ ಮೂಲದ ನವವಿವಾಹಿತರೊಬ್ಬರನ್ನು ಅಮೆರಿಕದ ಇಂಡಿಯಾನಾ ನಗರದಲ್ಲಿ ಗುಂಡಿಕ್ಕಿ ಕೊಲೆಗೈದ ಘಟನೆ ವರದಿಯಾಗಿದೆ.
ಮೃತರನ್ನು ಆಗ್ರಾ ಮೂಲದ ಗೌವಿನ್ ದಾಸೌರ್ (29) ಎಂದು ಗುರುತಿಸಲಾಗಿದೆ.
ಇವರು ತಮ್ಮ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಟ್ರಕ್ ಚಾಲಕನ ಜೊತೆ ಚಿಕ್ಕದೊಂದು ಗಲಾಟೆ ನಡೆದಿದೆ ಎಂದು ವರದಿಯಾಗಿದೆ.
ಇದರಂದ ಕೋಪಗೊಂಡ ಗೌವಿನ್ ತಮ್ಮ ಗನ್ ಹಿಡಿದು ಕಾರಿನಿಂದ ಹೊರಕ್ಕೆ ಬರುತ್ತಿದ್ದಂತೆಯೇ, ಟ್ರಕ್ ಚಾಲಕ ತನ್ನಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿ ಗೌವಿನ್‌ರನ್ನು ಕೊಲೆಗೈದಿದ್ದಾನೆ ಎಂದು ವರದಿ ತಿಳಿಸಿದೆ.