ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗುಪ್ತಾಂಗ ತೋರಿಸಿದ ಕಾಮುಕ

  July 20,2024
news-banner
ಕೇರಳ: ಕೇರಳದ ಬೇಕಲ್‍ನಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ತನ್ನ ಗುಪ್ತಾಂಗ ತೋರಿಸಿ ವಿಕೃತಿ ಮೆರೆದ ಘಟನೆ ವರದಿಯಾಗಿದೆ.

ಬಸ್ಸಿನಲ್ಲಿ ಮಹಿಳೆ ತನ್ನ ಆರು ವರ್ಷದ ಮಗಳೊಂದಿಗೆ ಕಾಞಂಗಾಡ್‍ಗೆ ತೆರಳುತ್ತಿದ್ದರು. ಈ ಸಂದರ್ಭ ಬಸ್ಸಿನಲ್ಲಿ ಹೆಚ್ಚಿನ ಜನರು ಇರಲಿಲ್ಲ.

ಮಹಿಳೆ ಮತ್ತು ಆಕೆಯ ಮಗಳ ಎದುರಿನ ಸೀಟಿನಲ್ಲಿ ಕುಳಿತಿದ್ದ ಯುವಕ ಕಂಡಕ್ಟರ್‌ಗೆ ಆ ವ್ಯಕ್ತಿಯ ಬಗ್ಗೆ ತಿಳಿಸಲು ಪ್ರಯತ್ನಿಸಿದಾಗ ಅವನು ಬಸ್‌ನಿಂದ ಇಳಿದು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಈ ಕುರಿತು ಮಹಿಳೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ದೃಶ್ಯ ಮಹಿಳೆಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ವೀಡಿಯೊದಲ್ಲಿ ವ್ಯಕ್ತಿಯು ತನ್ನ ಗುಪ್ತಾಂಗ ಹಿಡಿದುಕೊಂಡು ತನ್ನ ಎದುರು ಕುಳಿತಿರುವ ಮಹಿಳೆಯನ್ನು ನೋಡುತ್ತಿದ್ದು, ಮಹಿಳೆ ಅದನ್ನು ತನ್ನ ಮೊಬೈಲ್ ನಲ್ಲು ವೀಡಿಯೊ ಮಾಡಿರುವುದನ್ನು ನೋಡಬಹುದು.

ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.

Leave Your Comments