ನೆಲಮಂಗಲ: ನೆಲಮಂಗಲದ ಧರ್ಮನಾಯಕನ ತಾಂಡ್ಯ ಗ್ರಾಮದ ಬಳಿ ಮಾನಸಿಕವಾಗಿ ನೊಂದ ಯೂಟ್ಯೂಬ್ ಚಾನಲ್ ವರದಿಗಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿ ದಾಸರಹಳ್ಳಿ ಯೂಟ್ಯೂಬ್ ಕನ್ನಡ ಟಿವಿ ವರದಿಗಾರ ಮಂಜುನಾಥ್ (40) ಎಂದು ತಿಳಿದು ಬಂದಿದೆ.
ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಮಾನಸಿಕವಾಗಿ ನೊಂದಿರುವ ಬಗ್ಗೆ ಫೇಸ್ ಬುಕ್ ಲೈವ್ನಲ್ಲಿ ಹಂಚಿಕೊಂಡಿದ್ದರು ಎನ್ನಲಾಗಿದೆ.
ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.