ಕಾಪು: ರಾ.ಹೆ. 66ರ ಉದ್ಯಾವರ ಸೇತುವೆ ಬಳಿ ಬೈಕ್‌ಗೆ ಸ್ಕೂಟರ್ ಢಿಕ್ಕಿ ಹೊಡೆದು ಸವಾರರಿಬ್ಬರು ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡ ಬೈಕ್ ಸವಾರ ಸುರೇಶ್ ಮತ್ತು ಸ್ಕೂಟರ್ ಸವಾರ ವರುಣ್ ಎಂದು ತಿಳಿದು ಬಂದಿದೆ.
ಜೂ. 9ರಂದು ಮಧ್ಯಾಹ್ನ ಉಡುಪಿಯಿಂದ ಮನೆಗೆ ಬರುತ್ತಿದ್ದ ಬೈಕ್‌ಗೆ ರಾ.ಹೆ. 66ರ ಉದ್ಯಾವರ ಬ್ರಿಡ್ಜ್ ಬಳಿ ಹಿಂದಿನಿಂದ ಬಂದ ಸ್ಕೂಟರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಘಟನೆಯಿಂದ ಬೈಕ್ ಸವಾರ ಮತ್ತು ಸ್ಕೂಟರ್ ಸವಾರ ಇಬ್ಬರೂ ರಸ್ತೆಗೆ ಬಿದ್ದಿದ್ದು ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.