ಬಾಲಕಿಯ ಖಾಸಗಿ ವೀಡಿಯೊ ಇಟ್ಟುಕೊಂಡು ಬ್ಲಾಕ್‌ಮೇಲ್ ಪ್ರಕರಣ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ; ಅಪ್ರಾಪ್ರೆಯ ತಾಯಿ ಮೃತ್ಯು

  June 10,2024
news-banner
ಚಾಮರಾಜನಗರ: ಮಹದೇಶ್ವರ ಬೆಟ್ಟದ ತಾಳಬೆಟ್ಟ ಸಮೀಪ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಪ್ರಕರಣದಲ್ಲಿ ಮತ್ತೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತರು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಅಪ್ರಾಪ್ತೆಯ ತಾಯಿ ಲೀಲಾವತಿ (41) ಎಂದು ತಿಳಿದು ಬಂದಿದೆ. 

ಶನಿವಾರ ಲೀಲಾವತಿ ತಂದೆ ಮಹದೇವನಾಯಕ (65) ಅವರು ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೋಕಿನ ಚಂದಗಾಲು ಗ್ರಾಮದ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿತ್ತು. ಮಹದೇವನಾಯಕರ ಅಪ್ರಾಪ್ತ ವಯಸ್ಸಿನ ಮೊಮ್ಮಗಳನ್ನು ಪ್ರೀತಿಸುತ್ತಿದ್ದ ಯುವಕ ಬ್ಲಾಕ್ ಮೇಲ್ ನಡೆಸಿದ್ದ. 

ಮೊಮ್ಮಗಳ ಖಾಸಗಿ ವೀಡಿಯೊ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಮಾನಮರ್ಯಾದೆ ಅಂಜಿ ಕುಟುಂಬ ಮಹದೇಶ್ವರ ಬೆಟ್ಟದ ತಾಳಬೆಟ್ಟ ಸಮೀಪ ಆತ್ಮಹತ್ಯೆಗೆ ಯತ್ನಿಸಿತ್ತು ಎಂದು‌ ತಿಳಿದು ಬಂದಿದೆ.

ಅಸ್ವಸ್ಥರಾಗಿರುವ ಮಹದೇವನಾಯಕ ಪತ್ನಿ ಗೌರಮ್ಮ ಅವರಿಗೆ ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಹಾಗೂ ಮೊಮ್ಮಗಳಿಗೆ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Leave Your Comments