ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರಿಗೆ ಸಂತಾಪ ಸೂಚಿಸಿ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಅವರು ಹಾಕಿದ್ದ ಫೇಸ್ಬುಕ್ ಪೋಸ್ಟ್ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
"ದುಷ್ಕರ್ಮಿಗಳಿಂದ ಹತ್ಯೆಗೊಳಪಟ್ಟ ಯುವ ಮೋರ್ಚಾ ಜಿಲ್ಲಾ ಪದಾಧಿಕಾರಿ ಆದ ಸುಳ್ಯ ತಾಲೂಕಿನ ಬೆಳ್ಳಾರೆ ಪ್ರವೀಣ್ ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಒದಗಿಸಲಿ. ಹತ್ಯೆಕೋರರು ಯಾರೇ ಇರಲಿ, ಅವರನ್ನು ಬಂಧಿಸಿ ಕಠಿಣವಾದ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸುತ್ತೇನೆ." ಎಂದು ಬರೆದು ಪ್ರವೀಣ್ ನೆಟ್ಟಾರು ಅವರ ಫೋಟೋ ಸಹಿತ ಮಿಥುನ್ ರೈ ಅವರು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿ ಸಂತಾಪ ಸೂಚಿಸಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಸಮುದಾಯ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು " ಈ post ಯಾಕೆ ಮೊನ್ನೆ ಮಸೂದ್ ಹತ್ಯೆ ಆದಾಗ ಹರಿದಾಡಲಿಲ್ಲ. ನಮ್ಮ ಜೀವಕ್ಕೆ ಬೆಲೆ ಇಲ್ವಾ ? ನಮ್ಮ ಸಮುದಾಯ ಚಿಂತಿಸಬೇಕಾದ ವಿಷಯ ಇದು" ಎಂಬ ಲೇಖನವು ಮಿಥುನ್ ರೈ ಅವರು ಪೋಸ್ಟ್ ಮಾಡಿದ್ದ ಸ್ಕ್ರೀನ್ ಶಾರ್ಟ್ ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸದ್ಯ ಮಿಥುನ್ ರೈ ಅವರ ಫೇಸ್ಬುಕ್ ಪೋಸ್ಟ್ ನೊಂದಿಗಿನ ಈ ಬರಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.