image

ಫಲ್ಗುಣಿ ನದಿಗೆ ಬಿದ್ದು ಯುವಕ ನೀರುಪಾಲು

  November 21,2023
news-banner
image
image
ಬಜ್ಪೆ: ಪೊಳಲಿ ಸೇತುವೆ ಬಳಿ ಫಲ್ಗುಣಿ ನದಿಗೆ ಬಿದ್ದು ಯುವಕನೋರ್ವ ನೀರುಪಾಲಾಗಿರುವ ಘಟನೆ ನಡೆದಿದೆ.
 
ನೀರುಪಾಲಾದ ಯುವಕ ಕಾವೂರು ಆಕಾಶಭವನ ನಿವಾಸಿ ಪ್ರಭಾಕರ ಆಚಾರಿ ಎಂಬವರ ಪುತ್ರ ಪ್ರಶಾಂತ್ ಕುಮಾರ್ ಎಂದು ತಿಳಿದು ಬಂದಿದೆ.

ಮಂಗಳವಾರ ಬೆಳಗ್ಗೆ ತನ್ನ ಗೆಳೆಯರೊಂದಿಗೆ ಪೊಳಲಿ ದೇವಸ್ಥಾನಕ್ಕೆ ತೆರಳಿದ್ದ ಪ್ರಶಾಂತ್‌ ಆಚಾರಿ, ನದಿಗೆ ಇಳಿದು ಸ್ನಾನ ಮಾಡಿದ್ದರು ಎಂದು ತಿಳಿದು ಬಂದಿದೆ. 

ಆ ಬಳಿಕ ಅವರ ಶೂವೊಂದರ ದಾರ ನೀರಿನಲ್ಲಿ ನಾಪತ್ತೆಯಾಗಿತ್ತು. ಅದನ್ನು ಹೆಕ್ಕಲೆಂದು ನೀರಿಗೆ ಇಳಿದಿದ್ದ ವೇಳೆ ಅವರು ನದಿ ನೀರಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ನಾಪತ್ತೆಯಾಗಿರುವ ಪ್ರಶಾಂತ್‌ ಆಚಾರಿ ವಿವಾಹಿತರಾಗಿದ್ದು, ತಿಂಗಳು ಪ್ರಾಯದ ಮಗು ಒಂದಿದ್ದು, ಅದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದೆ ಎನ್ನಲಾಗಿದೆ. ಜೊತೆಗೆ ಅವರು ಆರ್ಥಿಕವಾಗಿ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರೆನ್ನಲಾಗಿದ್ದು, ಇದರಿಂದ ಕಂಗೆಟ್ಟು ಮಾನಸಿಕ ಒತ್ತಡಕ್ಕೆ ಮಣಿದು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
 
ಈ ಕುರಿತು ಬಜ್ಪೆ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಶಾಂತ್‌ ಆಚಾರಿ ಅವರಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ. 

ಈ ಸಂಬಂಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
image
image
image
image
image

Leave Your Comments