image

ಉಳ್ಳಾಲ: ಕಾರಿನ ಷೋರೂಮಿನಲ್ಲಿ ಯುವಕ ನೇಣಿಗೆ ಶರಣು

  November 21,2023
news-banner
image
image
ಉಳ್ಳಾಲ:  ಮುಡಿಪು ಸಮೀಪದ ಕಾರಿನ ಗ್ಯಾರೇಜ್ ನಲ್ಲಿ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಮೃತ ಯುವಕ ಕಂಕನಾಡಿಯ ಕಾಂಚನ ಷೋರೂಮಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿರುವ ಮುಡಿಪು ಗರಡಿಪಳ್ಳ ನಿವಾಸಿ ಕಿಶೋರ್ (25) ಎಂದು ತಿಳಿದು ಬಂದಿದೆ.

ಜಯ ಎಂಬವರಿಗೆ ಸೇರಿದ ಮುಡಿಪುವಿನ ಕಾರಿನ ಗ್ಯಾರೇಜ್ ಒಳಗಡೆ ಕಬ್ಬಿಣದ ರಾಡಿಗೆ ನೇಣು ಹಾಕಿಕೊಂಡು ಕೃತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ. 

ನ.20 ರಂದು ಕೆಲಸಕ್ಕೆ ಹೋದವರು ತಡರಾತ್ರಿಯಾದರೂ ಮನೆಗೆ ವಾಪಸ್ಸಾಗದೇ ಇರುವುದನ್ನು ಗಮನಿಸಿ ಮನೆಯ ಸುತ್ತ, ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿ ಬಳಿಕ ನಿತ್ಯ ಕಿಶೋರ್ ಕೆಲಸದಿಂದ ವಾಪಸ್ಸಾಗಿ ಕುಳಿತುಕೊಳ್ಳುವ ಗ್ಯಾರೇಜ್ ಸಮೀಪ ಹುಡುಕಾಡಿದಾಗ ಬೈಕ್ ಪತ್ತೆಯಾಗಿದ್ದು, ಒಳಗೆ ಗಮನಿದಾಗ ನೇಣುಹಾಕಿರುವುದು ಬೆಳಕಿಗೆ ಬಂದಿದೆ. 

ಆರು ತಿಂಗಳ ಹಿಂದಷ್ಟೇ ಕಿಶೋರ್ ಕೆಲಸ ಮಾಡುತ್ತಿದ್ದ ಷೋ ರೂಮಿನ ಸೂಪರ್ ವೈಸರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಆಪ್ತಸ್ನೇಹಿತರಾಗಿದ್ದ ಕಿಶೋರ್ ಈ ಘಟನೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
image
image
image
image
image

Leave Your Comments