ಪಾಂಡೇಶ್ವರ: ಮಹಿಳೆಯೊಬ್ಬರು ಬಸ್'ನಲ್ಲಿ 50ಸಾವಿರ ರೂ. ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಅನ್ನು ಮಾಲಿಕರಿಗೆ ವಾಪಸ್ ನೀಡುವ ಮೂಲಕ ಕಂಡಕ್ಟರ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಅವಸರದಲ್ಲಿ ಬಿಟ್ಟು ಹೋಗಿದ್ದ ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಮಹಿಳೆಯೊಬ್ಬರು ಅವಸರದಲ್ಲಿ ವ್ಯಾನಿಟಿ ಬ್ಯಾಗ್ ಬಿಟ್ಟು ಹೋಗಿದ್ದರು. ವ್ಯಾನಿಟಿ ಬ್ಯಾಗ್‌ನಲ್ಲಿ 50,000 ರೂ ಮೌಲ್ಯದ ವಸ್ತುಗಳಿದ್ದವು ಎನ್ನಲಾಗಿದೆ.
ಈ ಬ್ಯಾಗ್‌ಅನ್ನು ಕಂಡೆಕ್ಟರ್ ಪಾಂಡೇಶ್ವರ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಪಾಂಡೇಶ್ವರ ಪೊಲೀಸ್ ಠಾಣೆ ಎಎಸ್‌ಐ ಶ್ರೀಧರ್ ಅವರು ವ್ಯಾನಿಟ್ ಬ್ಯಾಗ್ ಮಾಲಿಕರನ್ನು ಕರೆಸಿದ್ದಾರೆ.
ನಂತರ ಕಂಡಕ್ಟರ್ ಜಯರಾಜ್ ಕೂಡ ಠಾಣೆಗೆ ಆಗಮಿಸಿದರು. ಈ ವೇಳೆ ಎಎಸ್‌ಐ ಸಮ್ಮುಖದಲ್ಲಿ ಕಂಡಕ್ಟರ್ ಜಯರಾಜ್, ಮಹಿಳೆಗೆ ವ್ಯಾನಿಟಿ ಬ್ಯಾಗ್ ಅನ್ನು ಹಿಂತಿರುಗಿಸಿದರು ಎನ್ನಲಾಗಿದೆ.
ಕಂಡಕ್ಟರ್ ಜಯರಾಜ್ ಅವರ ಪ್ರಾಮಾಣಿಕತೆಗೆ ಶ್ಲಾಘನೆ ವ್ಯಕ್ತವಾಗಿದೆ.