ಪ್ರಿಯಕರನ ಮನೆ ಟೆರೇಸ್ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಯುವತಿ

  November 20,2023
news-banner
ಬೆಂಗಳೂರು: ಪ್ರಿಯಕರನ ಮನೆ ಟೆರೇಸ್ ಮೇಲೆ ಹೋಗಿ ಯುವತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ನಡೆದಿದೆ. 

ನಾಲ್ಕೈದು ವರ್ಷಗಳಿಂದ ಯುವಕ ಹಾಗೂ ಯುವತಿ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಇದೀಗ ಯುವಕನು ಯುವತಿಗೆ ಕೈ ಕೊಟ್ಟಿದ್ದರಿಂದ ಬೇಸರಗೊಂಡ ಯುವತಿ, ನೇರವಾಗಿ ಆತನ ಮನೆಗೆ ತೆರಳಿದ್ದಾಳೆ.

ಯುವತಿ ಮನೆಗೆ ಬರುತ್ತಿದ್ದಂತೆಯೇ ಯುವಕ ಮನೆಯಿಂದ ಪರಾರಿಯಾಗಿದ್ದಾನೆ. ಹೀಗಾಗಿ ಕೈಯಲ್ಲಿ ಚಾಕು ಹಿಡಿದು ಪ್ರಿಯಕರನ ಮನೆ ಟೆರೇಸ್ ಮೇಲೆ ಹೋಗಿ ಯುವತಿ ಈಗಲೇ ಯುವಕನನ್ನು ಕರೆಸಿ ಎಂದು ಬೇಡಿಕೆ ಇಟ್ಟಿದ್ದಾಳೆ. ಮನೆಯ ಟೆರೇಸ್ ‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.

Leave Your Comments