ಸುರತ್ಕಲ್: ಟಿಪ್ಪರ್ ಲಾರಿಗೆ ಆಟೊ ರಿಕ್ಷಾ ಡಿಕ್ಕಿ: ಆಟೊ ಚಾಲಕ ಗಂಭೀರ

  November 20,2023
news-banner
ಸುರತ್ಕಲ್: ಏಕಾಏಕಿ ಟಿಪ್ಪರ್ ಲಾರಿ ನಿಂತ ಪರಿಣಾಮ ನಿಯಂತ್ರಣ ಕಳೆದುಕೊಂಡು ಆಟೊ ರಿಕ್ಷಾ ಡಿಕ್ಕಿ ಹೊಡೆದು ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಮುಕ್ಕ ಚೆಕ್ ಪೋಸ್ಟ್ ಬಳಿ ನಡೆದಿದೆ.

ಗಾಯಗೊಂಡವರನ್ನು ಮುಕ್ಕ ಈದ್ಗಾ ಬಳಿಯ ನಿವಾಸಿ ಮಯ್ಯದ್ದಿ ಎಂದು ತಿಳಿದು ಬಂದಿದೆ.

ಇವರು ಹಳೆಯಂಗಡಿ ಕಡೆಯಿಂದ ಮುಕ್ಕ ಕಡೆಗೆ ತೆರಳುತ್ತಿದ್ದ ಸಂದರ್ಭ ಎದುರಿನಿಂದ ತೆರಳುತ್ತಿದ್ದ ಟಿಪ್ಪರ್ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿ ನಿಲ್ಲಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ರಿಕ್ಷಾ ಟಿಪ್ಪರ್ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆಯಿತೆನ್ನಲಾಗಿದೆ. 

ಘಟನೆಯಿಂದ ರಿಕ್ಷಾ ಲಾರಿಯ ಅಡಿಭಾಗಕ್ಕೆ ಹೋಗಿದ್ದು, ಚಾಲಕ ಮಯ್ಯದ್ದಿ ಗಂಭೀರ ಗಾಯಗೊಂಡಿದ್ದರು ಎನ್ನಲಾಗಿದೆ. ತಕ್ಷಣ ಸಹ ವಾಹನ ಸವಾರರು ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

Leave Your Comments