ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಾ. ಕೆ.ಬಿ. ಶಿವಕುಮಾರ್ ಅವರು ಭಾನುವಾರ ಮಂಗಳೂರಿಗೆ ಆಗಮಿಸಿ, ಜಿಲ್ಲಾ ವೆನ್ ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆಗಳಿಗೆ ಭೇಟಿ ನೀಡಿದರು.
ಸುರತ್ಕಲ್: ಇಲ್ಲಿನ ಭಾರತೀಯ ಸೇನೆಯ ಲೆಫ್ಟಿನೆಂಟ್ ಆಗಿ ನೇಮಕಗೊಂಡ ಸುರತ್ಕಲ್ ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆಯ ಹಳೆವಿದ್ಯಾರ್ಥಿ ಲೆಫ್ಟಿನೆಂಟ್ ಆಕಾಶ್ ಆರ್. ಅವರನ್ನು ಶಾಲೆಯ ವತಿಯಿಂದ ಶನಿವಾರ ಗೌರವಿಸಲಾಯಿತು.
ಗುರುಪುರ: ಬಿಲ್ಲವ ಸಮಾಜ ಸೇವಾ ಸಂಘ(ರಿ) ಗುರುನಗರ ಗುರುಪುರ ಇದರ ನೂತನ ಸಮುದಾಯ ಭವನ ಮೇ 4ರಂದು ಉದ್ಘಾಟನೆಗೊಳ್ಳಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿ ಉಪಾಧ್ಯಕ್ಷ ದೀಪಕ್ ಕೋಟ್ಯಾನ್ ಅವರು ಭಾನುವಾರ ಬಿಲ್ಲವ ಮಂದಿರಲ್ಲಿ ಬಿಡುಗಡೆಗೊಳಿಸಿದರು.
ಹಳೆಯಂಗಡಿ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಬೊಳ್ಳೂರು ದಾರುಲ್ ಉಲೂಂ ಮದ್ರಸದ ವಿದ್ಯಾರ್ಥಿನಿ ಫಾತಿಮಾ ಶೈಮಾ 357 ಅಂಕಗಳನ್ನು ಪಡೆದುಕೊಂಡು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಬೆಂಗಳೂರು: ಪತಿ ಹಾಗೂ ಆತನ ಸಹಚರರ ಜೊತೆಗೆ
ಸೇರಿಕೊಂಡು ಪ್ರಿಯಕರನ ಹತ್ಯೆ ಮಾಡಿ, ಮೃತದೇಹವನ್ನು ರೈಲ್ವೆ ಹಳಿಗೆ ಎಸೆದಿದ್ದ ಪ್ರೇಯಸಿ ಸೇರಿದಂತೆ ಮೂವರನ್ನು ಬೆಂಗಳೂರು ಗ್ರಾಮಾಂತರ ರೈಲ್ವೆ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ಮಕ್ಕಳು ಓದಿನಲ್ಲಿ ಹಿಂದೆ ಇದ್ದಾರೆ ಎಂದು ಮನನೊಂದ ತಂದೆಯೋರ್ವ ತನ್ನಿಬ್ಬರು ಮಕ್ಕಳನ್ನು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.